Welcome to Mogaveera Yuva Sanghatane
ಅಸಂಘಟಿತ ಸಮಾಜದ ಯುವಕ ಯುವತಿಯರನ್ನು ಸಂಘಟಿಸಿ ಸಮಾಜದ, ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಹಾಗೂ ಸಾಂಸ್ಕೃತಿಕ ಶ್ರೇಯೋಭಿವೃದ್ಧಿಗಾಗಿ ಶ್ರಮಿಸಲು ಒಗ್ಗೂಡಿಸಬೇಕೆಂಬ ಕರ್ನಾಟಕ ಕರಾವಳಿಯ ಸಮಾಜದ ಎಲ್ಲರ ಆಶಯದಂತೆ, ನಾವು ಸಮಾನ ಮನಸ್ಕರು ಜಿಲ್ಲಾಮಟ್ಟದಲ್ಲಿ ಮೊಗವೀರ ಯುವ ಸಂಘಟನೆ(ರಿ.) ಎಂಬ ರಾಜಕೀಯ ರಹಿತ ಸಂಘಟನೆಯನ್ನು ಹುಟ್ಟು ಹಾಕಿ,ಕರ್ನಾಟಕ ಸಂಘಗಳ ನೋಂದಾವಣೆ ಅಧಿ ನಿಯಮ,1960 ನೆಯ ಇಸವಿ 17 ಕ್ರಮಾಂಕದ ಕರ್ನಾಟಕ ಅಧಿನಿಯಮದ ಮೇರೆಗೆ ನೋಂದಾಯಿಸಲ್ಪಟ್ಟು ಮೊಗವೀರ ಯುವ ಸಂಘಟನೆ(ರಿ.)ಉಡುಪಿ ಜಿಲ್ಲೆ ಹೆಸರಿನಲ್ಲಿ ನೊಂದಾವಣೆಗೊಂಡಿರುತ್ತದೆ. ದಿನಾಂಕ: 6-3-2005 ರಂದು ಮೊಗವೀರ ಮುಂದಾಳು ಜಿ.ಶಂಕರ್ ರವರಿಂದ ಉದ್ಘಾಟಿಸಲ್ಪಟ್ಟು ಪ್ರಸ್ತುತ ಉಡುಪಿ ಅಂಬಲಪಾಡಿ ರಾಷ್ಟ್ರೀಯ ಹೆದ್ದಾರಿ ಸಮೀಪದ ಶ್ಯಾಮಿಲಿ ಸಭಾಂಗಣದ 2ನೇ ಮಹಡಿಯಲ್ಲಿರುವ ಕಚೇರಿಯಲ್ಲಿ ಕಾರ್ಯಚರಿಸುತ್ತಿದೆ. ಅಲ್ಲದೆ ಉಡುಪಿ ಜಿಲ್ಲೆಯಾದ್ಯಂತ ಗ್ರಾಮೀಣ ಪ್ರದೇಶದ ಮೊಗವೀರ ಯುವಕ ಯುವತಿಯರನ್ನು ಒಗ್ಗೂಡಿಸಿ 22 ಶಾಖೆಗಳನ್ನು(ಘಟಕ) ಹೊಂದಿದು, 15,625 ಸದಸ್ಯರನ್ನು ನೋಂದಾಯಿಸಿಕೊಂಡು ಜಾತಿ ಮತ ಭೇಧವಿಲ್ಲದೆ, ನಿರಂತರ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ರಾಜ್ಯದಲ್ಲಿ ರಾಜಕೀಯ ರಹಿತ ಪ್ರಭಾವಿ ಮೊಗವೀರ ಯುವ ಸಂಘಟನೆಯಾಗಿ ಗುರುತಿಸಿಕೊಂಡಿದೆ. ಸಂಘಟನೆಯು ಕಳೆದ 5 ವರ್ಷಗಳಿಂದ ಡಾ: ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ನ ಸಹಭಾಗಿತ್ವದೊಂದಿಗೆ ಸಾಮೂಹಿಕ ವಿವಾಹ ಸಮಾರಂಭಗಳನ್ನು ನಡೆಸಿಕೊಂಡು ಬರುತ್ತಿದ್ದು, ಇದುವರೆವಿಗೂ 129 ಜೋಡಿ ವಧೂ-ವರರು ಹಸೆಮಣೆ ಏರಿರುತ್ತಾರೆ. ಹಾಗೂ ಸಂಘಟನೆಯು ಸಾಮೂಹಿಕ ವಿವಾಹದ ಆಯೋಜಕರೆಂದು ನೋಂದಣಿ ಕಚೇರಿಯಲ್ಲಿ ನೊಂದಾಯಿಸಿಕೊಂಡಿರುತ್ತದೆ.
Events
Free Notebook Distribution - 2017...
ಡಾ. ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ನಿಂದ ಉಚಿತ ನೋಟ್ ಪುಸ್ತಕ ವಿತರಣೆ ಡಾ. ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ಹಾಗೂ ಮೊಗವೀರ ಯುವ ಸಂಘಟನೆ ಉಡುಪಿ ಇದರ ವತಿಯಿಂದ ಆಯೋಜಿಸಿದ್ದ ಪ್ರತಿಭಾವಂತ ಹಾಗೂ ಬಡ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕ ವಿತರಣೆ ಸಮಾರಂ...